¡Sorpréndeme!

'ಬಿಗ್ ಬಾಸ್' ಕೊಟ್ಟಿರುವ ಸೀಕ್ರೆಟ್ ಟ್ವಿಸ್ಟು ಪಾಪ ಸ್ಪರ್ಧಿಗಳಿಗೆ ಗೊತ್ತೇ ಇಲ್ಲ | Filmibeat Kannada

2017-12-14 1,516 Dailymotion

ಬಿಗ್ ಬಾಸ್' ಮನೆಯೊಳಗೆ ನಟಿ ವೈಷ್ಣವಿ 'ವೈಲ್ಡ್ ಕಾರ್ಡ್ ಸ್ಪರ್ಧಿ' ಆಗಿ ಹೋದಾಗ ಅದಾಗಲೇ ಅಲ್ಲಿದ್ದ ಸ್ಪರ್ಧಿಗಳಿಗೆ ಅಷ್ಟೊಂದು ಬಿಸಿ ಮುಟ್ಟಲಿಲ್ಲ. ಯಾವುದಕ್ಕೂ ಕ್ಯಾತೆ ತೆಗೆಯದ ವೈಷ್ಣವಿ ಸೈಲೆಂಟ್ ಆಗಿ ಇದ್ದಿದ್ರಿಂದ ಯಾರಿಗೂ ತಲೆಬಿಸಿ ಆಗಲಿಲ್ಲ.ಆದ್ರೀಗ, 'ಬಿಗ್ ಬಾಸ್' ಮನೆಯೊಳಗೆ 'ವೈಲ್ಡ್ ಕಾರ್ಡ್ ಸ್ಪರ್ಧಿ' ರೂಪದಲ್ಲಿ ಕಾಲಿಟ್ಟಿರುವ 'ಕಿರಿಕ್' ಹುಡುಗಿ ಸಂಯುಕ್ತ ಹೆಗ್ಡೆ ಹಾಗಿಲ್ಲ. ಆಕೆ ಅಕ್ಷರಶಃ 'ಕಿರಿಕ್' ಮಾಡುತ್ತಿದ್ದಾರೆ.!'ಬಿಗ್ ಬಾಸ್' ಮನೆಯೊಳಗೆ ಇರುವ ಅಷ್ಟೂ ಸ್ಪರ್ಧಿಗಳಿಗೆ ನೀರಿಳಿಸುತ್ತಿದ್ದಾರೆ ನಟಿ ಸಂಯುಕ್ತ ಹೆಗ್ಡೆ. 'ದೊಡ್ಮನೆ'ಯೊಳಗೆ ಕಾಲಿಟ್ಟ ಕೆಲವೇ ಕ್ಷಣಗಳಲ್ಲಿ ಜಗನ್, ನಿವೇದಿತಾ ಹಾಗೂ ಜಯಶ್ರೀನಿವಾಸನ್ ಮುಖಕ್ಕೆ ಹೊಡೆದಂತೆ ಮಾತನಾಡಿರುವ ಸಂಯುಕ್ತ ಬಗ್ಗೆ ಆಗಲೇ ಕೆಲವರಿಗೆ ಆತಂಕ ಶುರು ಆಗಿದೆ. ಆದ್ರೆ ಪಾಪ.. ಸ್ಪರ್ಧಿಗಳಿಗೆ ಸೀಕ್ರೆಟ್ ಮಾತ್ರ ಗೊತ್ತಾಗಿಲ್ಲ.'ಬಿಗ್ ಬಾಸ್' ಮನೆಯೊಳಗೆ 'ಕಿರಿಕ್ ಪಾರ್ಟಿ' ಚಿತ್ರದ ನಾಯಕಿ ಸಂಯುಕ್ತ ಹೆಗ್ಡೆ ಸ್ಪರ್ಧಿ ಆಗಿ ಹೋಗಿಲ್ಲ. ಬದಲಾಗಿ ವಿಶೇಷ ಅತಿಥಿಯಾಗಿ ಕಾಲಿಟ್ಟಿದ್ದಾರೆ.''ಬಿಗ್ ಬಾಸ್' ಮನೆಯೊಳಗೆ ಹೋಗ್ತಾಯಿದ್ದೀನಿ. ಆದ್ರೆ, ಒಂದು ಸೀಕ್ರೆಟ್ ಇದೆ. ನಾನು ಸ್ಪರ್ಧಿ ಆಗಿ ಹೋಗುತ್ತಿಲ್ಲ. ನಾನು ಸೆಲೆಬ್ರಿಟಿ ಆಗೇ ಹೋಗುತ್ತಿದ್ದೇನೆ. ಬರೀ ಸ್ವಲ್ಪ ದಿನಕ್ಕೆ ಮಾತ್ರ ಹೋಗುತ್ತಿದ್ದೇನೆ. ಮನೆಯೊಳಗೆ ಇರೋರಿಗೆ ನಾನು ವೈಲ್ಡ್ ಕಾರ್ಡ್ ಸ್ಪರ್ಧಿ ಆಗಿ ಹೋಗುತ್ತಿದ್ದೇನೆ'' ಎಂದು ನಟಿ ಸಂಯುಕ್ತ ಹೆಗ್ಡೆ ಹೇಳಿದ್ದಾರೆ.

Bigg Boss Kannada 5: Week 8: big boss is one of the big reality show in colors kannada and there Samyuktha Hegde enters as special guest in to bigg boss house and there she started to comment about contestants